Wednesday, March 19, 2008

ಬಿಐಎಲ್‌ನಲ್ಲಿ ಕನ್ನಡಿಗರಿಗೆ ಉದ್ಯೋಗದ ಸಿಂಹಪಾಲು



ರೆಫ್:-http://thatskannada.oneindia.in/response/2008/0319-bial-jobs-for-karnataka-locals.html


ಇನ್ನೇನು ಪ್ರಾರಂಭವಾಗಲಿರುವ "ಬೆಂಗಳೂರು ಆಂತರಾಷ್ಟ್ರೀಯ ದೇವನಹಳ್ಳಿ ವಿಮಾನ ನಿಲ್ದಾಣ" ದಲ್ಲಿ ಜನಕವಾಗುವ ಅನೇಕ ಖಾಲಿ ಹುದ್ದೆಗಳಿಗೆ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕೆಂದು ಕನ್ನಡ ಪರ ಸಂಘಟನೆಗಳು ಮಾಡಿರುವ ಬೇಡಿಕೆ ಬಹಳ ನ್ಯಾಯಸಮ್ಮತವಾಗಿದೆ. ಸಾವಿರಾರು ರೈತ / ಇತರೆ ಕುಟುಂಬಗಳು ಈ ಭಾರೀ / ಮಹತ್ವದ ಯೋಚನೆಗೆ ತಮ್ಮ ಮನೆ , ಮಠ , ಜಮೀನು ಇತ್ಯಾದಿಗಳನ್ನು ಕಳೆದುಕೊಂಡಿದ್ದಾರೆ. ಅವರು ಆ ತ್ಯಾಗಕ್ಕೆ ಮುನ್ನ ಅವರಿಗೆ ಸೂಕ್ತವಾದ ಉದ್ಯೋಗವನ್ನು ವಿಮಾನ ನಿಲ್ದಾಣದಲ್ಲಿ ಪಡೆಯುವದಾಗಿ ಭರವಸೆಯನ್ನು ಪಡೆದಿದ್ದರು. ಆದರೆ ಈಗ ಆಗುತ್ತಿರುವ ವಾಸ್ತವದ ಸಂಗತಿಯೆ ಬೇರೆ. BIAL ತಾನು ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳುವ ಯಾವ ಸೂಚನೆಯೂ ಕಾಣುತ್ತಿಲ್ಲ. ಈಗಾಗಲೆ ಐಟಿ / ಬಿಟಿಗಾಗಿ ಕನ್ನಡಿಗರಾದ ನಾವು ಅನೇಕ ತ್ಯಾಗಗಳನ್ನು ಮಾಡಿದ್ದೇವೆ. ಈಗ ಮತ್ತೊಂದು ತ್ಯಾಗ ಅಗತ್ಯವೆ ? ಅದೂ ನಮ್ಮ ಹಿತಾಸಕ್ತಿಗಳನ್ನು ಬಲಿಗೊಟ್ಟು ಹೊರರಾಜ್ಯದವರಿಗೆ ಮನ್ನಣೆ ಕೊಡುವ ಔಚಿತ್ಯವಾದರು ಇದೆಯೇ? ಸರಕಾರವಿಲ್ಲದ ಈ ಪರಿಸ್ಥಿತಿಯಲ್ಲಿ ನೆರೆ ರಾಜ್ಯಗಳು ನಮ್ಮ ಸಹನೆಯನ್ನು ಹೇಗೆ ದುರುಪಯೋಗಪದಿಸಿಕೊಳ್ಳುತ್ತಿವೆ ಎಂದು ಈಗಾಗಲೆ ಮನಗಂಡಿದ್ದೇವೆ. ರೈಲ್ವೇ ಉದ್ಯೊಗಗಳ ನೇಮಕಾತಿಯಲ್ಲಿ, ರೈಲು ಸಂಪರ್ಕಗಳಲ್ಲಿ ನಮಗಾದ ಅನ್ಯಾಯ ಗೊತ್ತೇ ಇದೆ. ಈಗ ನಾವೆಲ್ಲ ಸಂಘಟಿತರಾಗಿ ಮಾಧ್ಯಮಗಳ ಸಹಾಯದಿಂದ "ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಡಾಣದಲ್ಲಿ" ಕನ್ನಡಿಗರಿಗೆ ಉದ್ಯೋಗಗಳಲ್ಲಿ ಸಿಂಹಪಾಲು ದೊರೆಯಲು ಒತ್ತಾಯಿಸುವದು ಅಗತ್ಯವಾಗಿದೆ. ಇತಿ,ಕರುಣಾ ಬಾ. ಶಂ, ಬೆಂಗಳೂರು(ಸದ್ಯದಲ್ಲೇ ಪ್ರಾರಂಭವಾಗಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಿಸುಮಾರು 12 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಉದ್ಯೋಗಗಳಲ್ಲಿ ಸಿಂಹಪಾಲು ಸ್ಥಳೀಯರಿಗೆ, ಅದರಲ್ಲೂ ಮುಖ್ಯವಾಗಿ ಸ್ಥಳೀಯ ಕನ್ನಡಿಗರಿಗೆ ಮತ್ತು ನಿಲ್ದಾಣಕ್ಕಾಗಿ ಜಮೀನು ಬಿಟ್ಟುಕೊಟ್ಟವರಿಗೆ ಸಿಗಬೇಕು ಎಂದು ಅನೇಕ ಓದುಗರ ಪತ್ರಗಳು ದಟ್ಸ್‌ಕನ್ನಡಕ್ಕೆ ಹರಿದು ಬರುತ್ತಲೇ ಇವೆ. ದಟ್ಸ್‌ಕನ್ನಡದ ಅಭಿಮತ ಕೂಡ ಇದೇ ಆಗಿದ್ದು, ಕನ್ನಡಿಗರಿಗೇ ಕೆಲಸ ಸಿಗಬೇಕೆಂಬ ಅಭಿಯಾನಕ್ಕೆ ನಮ್ಮ ಅಂತರ್ಜಾಲ ತಾಣ ಸಂಪೂರ್ಣ ಸಹಕಾರ ನೀಡಲಿದೆ. - ಸಂಪಾದಕ)

1 comment:

ಬಡಗಿ said...

Dear Harish,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends.